ಸಕ್ಕರೆ ಖಾಯಿಲೆ / ಮಧುಮೇಹ - AV HOSPITAL

ಸಕ್ಕರೆ ಖಾಯಿಲೆ / ಮಧುಮೇಹ

ಇದು ಸಕ್ಕರೆ ಜೀರ್ಣಕ್ರಿಯೆಗೆ ಬೇಕಾಗುವ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗಿರುತ್ತದೆ. ಅಥವಾ ಸಂಪೂರ್ಣ ಉತ್ಪತ್ತಿಯಾಗುತ್ತಿರುವುದಿಲ್ಲ. ಉತ್ಪತ್ತಿಯಾದರೂ ಅದು ಸಹಜವಾಗಿ ಕಾರ್ಯನಿರ್ವಹಿಸುವುದಿಲ್ಲ. ಕಾರಣ ವಿರೋಧವಿರಬಹುದು ಅಥವಾ ಸಹಜವಾಗಿರದೆ ಇರಬಹುದು.

ಆದ್ದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತೀ ಜಾಸ್ತಿಯಾಗಿ, ಇದು ಜೀವಕ್ಕೆ ತೊಂದರೆಯಾಗುವ ಮಟ್ಟಕ್ಕೆ ಹೆಚ್ಚುತ್ತದೆ ಮತ್ತು ಜೀವಾಳದ ಅಂಗಗಳನ್ನು ಹಾಳು ಮಾಡುತ್ತದೆ. ಇವುಗಳಲ್ಲಿ ಮೆದುಳು,ಹೃದಯ, ಮೂತ್ರಜನಕಾಂಗ, ಕಣ್ಣು ಇತ್ಯಾದಿ...

ಈ ಖಾಯಿಲೆ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಎಂದರೆ ಇಂದು ಪ್ರಪಂಚದಲ್ಲಿ ಸುಮಾರು 415 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆ. ಇದು 2040ರ ಹೊತ್ತಿಗೆ 650 ಮಿಲಿಯನ್ ಆಗುವ ಸಾಧ್ಯತೆ ಇದೆ. ಇದು ಇಷ್ಟರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಕಾರಣ ಇಲ್ಲಿನ ಅಹಾರ ಬದ್ಧತೆ ಮತ್ತುಅನುವಂಶಿಯತೆ, ಭಾರತದಲ್ಲಿ ಸುಮಾರು ೭೦ ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆ. ಇನ್ನು 50 ಮಿಲಿಯನ್ ಜನರು ಮಧುಮೇಹಿಗಳಾಗುವ ಹೊಸ್ತಿಲಿನಲ್ಲಿದ್ದಾರೆ. ಇವರಿಗೆ ಸರಿಯಾದ ಮಾಹಿತಿ ನೀಡಿದರೆ ಇವರು ರೋಗಿಯಾಗುವುದನ್ನು ತಪ್ಪಿಸಬಹುದು.ಇದು ನಗರವಾಸಿಗಳಲ್ಲಿ ಹೆಚ್ಚು.ಇದಕ್ಕೆ ಕಾರಣ ಬೊಜ್ಜುತನ, ಜಡತ್ವ, (ವ್ಯಾಯಮವಿಲ್ಲದಿರುವುದು), ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವುದು( ಹೆಚ್ಚು ಕೊಬ್ಬಿನ ಮತ್ತು ಸಕ್ಕರೆ ಇರುವ ಆಹಾರ), ಅತೀ ಒತ್ತಡದಲ್ಲಿ ಜೀವಿಸುವುದು(Stressfulllife). ಈ ಎಲ್ಲಾ ಕಾರಣಗಳಿಂದಇನ್ಸುಲಿನ್ ಪ್ರತಿರೋಧಕ ಉಂಟಾಗುತ್ತದೆ.

ಈ ಖಾಯಿಲೆಯ ಬಗ್ಗೆ ಮಾಹಿತಿ ಅತೀ ಮುಖ್ಯ ಕಾರಣ.ನಮ್ಮ ದೇಶದ ನಗರವಾಸಿಗರಲ್ಲಿ ಶೇಕಡ 25ರಷ್ಟು ಜನರು ಈ ರೋಗದ ಹೆಸರೆ ಕೇಳಿಲ್ಲ. ಶೇ. ೬೦ರಷ್ಟು ಜನರಿಗೆ ಇದರಿಂದ ಜೀವಾಳದ ಅಂಗಗಳು ಹಾಳಾಗುತ್ತವೆಎಂಬುದರ ಬಗ್ಗೆ ಅರಿವಿಲ್ಲ. ಶೇ. 60ರಷ್ಟು ಜನರಿಗೆ ಇದು ಬರುವುದನ್ನು ತಡೆಯಬಹುದುಎಂಬ ಮಾಹಿತಿಯಲ್ಲಿ ಮತ್ತು ಶೇ. 80ರಷ್ಟು ಜನರಿಗೆ ಈ ಖಾಯಿಲೆಗೆ ಕಾರಣ / ಅಪಾಯ (Risk) ದ ಬಗ್ಗೆ ತಿಳಿದಿಲ್ಲ. ಶೇ 30 ರಷ್ಟು ಮಾತ್ರ ಸರಿಯಾಗಿ ಔಷಧಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *